Monday, October 18, 2010

???????

ಮತ್ತೆ ಮರುಕಳಿಸಿಹುದು
ಮುಚ್ಚಲಾರದ ಕೊಳೆಯು
ಮಸುಕಾಗಿ ಬ೦ದು
ಎನ್ನ ಮತ್ತೆ ಮುಸುಕುತಿಹುದು..

ಮುಸ್ಸ೦ಜೆಯಾ ಮಡಿಲು
ಮತ್ತೆ ಕೈ ಜಾರಿಹುದು
ಮತ್ತದೋ ಮನವೆಲ್ಲ
ಮತ್ತಿನಲಡಗುತಿಹುದು..

ಮರೆವೆನೆ೦ದರೂ ಜೀವ
ಮರೆಯಲಾಗದು ನೋವ
ಮರುಗುತಿಹ ಮನಕಿ೦ದು
ಮುಕ್ತಿಯೆ೦ದು???

ಮುಪ್ಪಾದ ಆಲೋಚನೆಗಳು
ಮರುಹಟ್ಟನು ಪಡೆದು
ಮತ್ತೆ ಚಿಗುರುವುದೆ೦ದು
ಮರಳು ಮನವೆ!..

ಮರಳುಗಾಡಿನ ಸೊಗಡು
ಮನಸ ಮೂಲೆಯಲಿ೦ದು
ಮೂದಲಿಸಿ ನನ್ನನ್ನು
ನಗುತಲಿಹುದು..!

ಅತ್ತ ಚೂರಾದ ಹಗೆ
ಇತ್ತ ಬೇರೊಡೆವ ಬಗೆ
ನಿಲ್ಲಬಹುದೇ ಕಾಯ
ನೆಲದ ಮೇಲೆ???

1 comment: